ಮೌನ - ಸ್ಪಂದನ



ಹೃದಯದಿ ತುಂಬಿರಲು
ನೂರೆಂಟು ಭಾವ
ವಿವರಿಸಬಲ್ಲುದೆ ಶಬ್ದ-ಕೋಶ
ಮನದಿ ತುಂಬಿದ ತುಮುಲಗಳ...
ಆತ್ಮೀಯರ ಮನ ಮುಟ್ಟುವಂತೆ?


ಮಾತೆಯ ಮಮತೆಯ ಸ್ಪರ್ಶ..
ಮುಗ್ಧ ಮಗುವಿಗೆ ನೀಡುವ ಸಿಹಿ ಮುತ್ತು
ಮಾತನಾಡುವುದೇ ಪದಗಳಲಿ?
ಪದಗಳಿಗೆ ಇಲ್ಲಿ ಬೆಲೆಯೆಲ್ಲಿ?
ತುಂಬಿ ಬಂದಿರಲು ಪ್ರೀತಿ ಮನದಲಿ..


ಒಂದು ಕಣ್ಣಿನ ನೋಟ..
ನುಡಿವುದು ನೂರು ಮಾತುಗಳ
ಸ್ಪಂದಿಸಬೇಕಾದಲ್ಲಿ ಹೃದಯ
ಬೇಕಿಲ್ಲ ಮಾತುಗಳ ಆಶ್ರಯ..


ಹೃದಯದಾಳದಲಿ ಹೆಪ್ಪುಗಟ್ಟಿದ
ನೋವು-ದುಃಖಗಳ
ಹೇಳಲು ಸಾಧ್ಯವೇ ಬರಿ ಮಾತಿನಲಿ?
ಎಲ್ಲ ಮಾತುಗಳು ಕರಗಿ ನೀರಾಗುವವು
ಮೌನ ರಾರಾಜಿಸುವುದಿಲ್ಲಿ...


ದೈನಂದಿನ ಬದುಕಿಗೆ ಮಾತು ಅಗತ್ಯ
ಮಾತಿಲ್ಲದೆ ದೈನಂದಿನ ಬದುಕು ನಕಾರ..
ಆದರೆ
ಹೃದಯವಂತರ ಲೋಕದಲಿ
ಭಾವನೆಗಳ ಸಂಗಮದಲಿ..
ಮಾತು ಬೆಳ್ಳಿ ಅರ್ಥಪೂರ್ಣ ಮೌನಬಂಗಾರ!


 ಚಿತ್ರ ಕೃಪೆ: ಅಂತರ್ಜಾಲ 

Comments

ಪರಸ್ಪರತೆಯನ್ನು ಅತೀ ನವಿರಾಗಿ ಚಿತ್ರಿಸಿದ್ದೀರ.

ಕವನದ ಹೂರಣ ಮತ್ತು ಪ್ರಸ್ತುತಿ ಎರಡಕ್ಕೂ ಪೂರ್ಣ ಅಂಕಗಳು.
ಹೃದಯವಂತರ ಲೋಕದಲಿ
ಭಾವನೆಗಳ ಸಂಗಮದಲಿ..
ಮಾತು ಬೆಳ್ಳಿ ಅರ್ಥಪೂರ್ಣ ಮೌನ ‘ಬಂಗಾರ’!

ಚಂದದ ಕವನ...
ತಮ್ಮ ಕವನದ ಕೊನೆಯ ಸಾಲಿನ ಮೇಲೆ ನನ್ನದೊಂದು ಕವನವಿದೆ ಬ್ಲಾಗಿನಲ್ಲಿ,,,,
ಸಾಧ್ಯವಾದರೊಪಮ್ಮೆ ಓದಿ..
"ಮಾತು-ಮೌನ" ದಲ್ಲಿ....
sunaath said…
ಮಂಜುಳಾ,
ಮಾತಿಗೆ ಮೀರಿದ ಮೌನಭಾವನೆಗಳನ್ನು ಪದಗಳಲ್ಲಿ ಸಮರ್ಥವಾಗಿ ಮೂಡಿಸಿದ್ದೀರಿ. ಇದೇ ಕವನ ಮಾಡಬೇಕಾದ ಕೆಲಸ!
ಸುಂದರ ಕವನ .. ಎಲ್ಲಾ ಸಾಲುಗಳು ಅರ್ಥಪೂರ್ಣ,,,ಮಾತಲ್ಲಿ ಹೇಳಲಾಗದೆ ಇದ್ದುದನ್ನು ಕೆಲವೊಮ್ಮೆ ಮೌನದಲ್ಲಿ ಅರ್ಥವಾಗುವಂತೆ ಹೇಳಬಹುದು,,,ಚೆನ್ನಾಗಿದೆ .....

Popular Posts