ಮೇಣದ ಬತ್ತಿ
ನೀನೆಂಬ
ಮೇಣದಲಿ
ನಾನೆಂಬ
ಬತ್ತಿ
ಜೊತೆಯಾಗಿ
ಹಿತವಾಗಿ
ಬೆರೆತಾಯ್ತು
ನೂರ್ಕಾಲ
ಬೆಳಗಲಿಲ್ಲ
ಇನ್ನೂ ಪ್ರೀತಿ ಹಣತೆ...
ನನ್ನಲ್ಲೂ,
ನಿನ್ನಲ್ಲೂ
ನಮ್ಮ
ಮೌನಗಳಲ್ಲೂ
ನುಸುಳಲಿಲ್ಲ
ಯಾವ ಕುಂದು-ಕೊರತೆ!
ಸುಮ್ಮನೇ
ಕಾಯುವುದೂ
ಒಂದು
ತೆರನಾದ ತಪಸ್ಸು
ಆರಾಮಾಗಿದ್ದುಬಿಡೋಣ
ಆಗುವವರೆಗೂ
ತಮಸ್ಸು..
ಆಮೇಲೆ..
ಅನು-ಕ್ಷಣವೂ
ನಾ ಬೆಂದು ಸುಡುತಿರುವಾಗ
ಹನಿ-ಹನಿಯಾಗಿ,
ನೀ ಕರಗಿ ಬೆರೆಯಬೇಕು
ನಾ
ಕಾಯಬೇಕು, ನೀ ಕರಗಬೇಕು
ಜಗದ
ತುಂಬೆಲ್ಲ ಆಗ
ಝಗ-ಮಗ
ಬೆಳಕು..!
ನಿನ್ನಲ್ಲಿ
ನಾನು,
ನನಗಾಗಿ
ನೀನು
ಕರಗಿ
ಬೆಳಗುವಾಗ
ಜಗವೆಲ್ಲ
ಬೆರಗು..
ನೀ
ಕರಗದೇ
ನಾ
ಬೆಳಗಲಾರೆ
ನಾ
ಬೆಳಗದೇ
ನೀ
ಕರಗಲಾರೆ..
ಬಾ
ಜೊತೆ-ಜೊತೆಯಾಗಿ
ಜ್ವಾಲಾಮುಖಿಯಾಗೋಣ
ನಮಿಸುತ್ತ
ನಮ್ಮನೊಂದು
ಮಾಡಿದ
ಕೈಗಳಿಗೆ
ಸ್ಮರಿಸುತ್ತ
ಬೆಳಕ ಕಿಡಿ
ಹೊತ್ತಿಸಿದ
ಕೈಗೆ
ಅಡಿಯಿಂದ-ಮುಡಿವರೆಗೆ
ಮೊದಲಿಂದ
ಕೊನೆವರೆಗೆ
ನಾವೇ
ಅಲ್ಲವೇ
ಸಾರ್ಥಕ
ಸಾಂಗತ್ಯದನುಕರಣೆ
ಅಮರ
ಪ್ರೇಮದ
ಜ್ವಲಂತ
ಉದಾಹರಣೆ...!
ಚಿತ್ರ ಕೃಪೆ: ಅಂತರ್ಜಾಲ
Comments
ಬಾಳಿನ ಬೆಳಕಾಗಲಿ ಈ ನಂದಾ ದೀಪ....