ಪ್ರಶ್ನೆ?

ನಿನ್ನ ಪ್ರೀತಿಗೇಕೆ ಅರ್ಥವಿಲ್ಲ?
ದಿಕ್ಕು-ದೆಸೆಗಳಿಲ್ಲ?
ಸರಾಗವಾಗಿ ಸಾಗಿ
ನನ್ನಂತರಾಳ ಕಲುಕಿ
ಪ್ರೀತಿ ಕುಲುಮೆ ಕುದಿಯುವಾಗ
ನೀನೇಕೆ ಮೆಲ್ಲ ಜಾರುವೆ?
ನಾನೇಕೆ ನೋವ ಮೇರೆ ಮೀರುವೆ?

ಕಣ್ಣಿನಲ್ಲಿ ನವಿಲ ಬಣ್ಣ ಕನಸು
ಮನಸಿನಲ್ಲಿ ಪ್ರೀತಿ ಹುಲುಸು ಹುಲುಸು
ನಾನು ಮನಸು, ನೀನು ಕನಸು
ಎಲ್ಲ ಈಗ ಇರುಸು-ಮುರುಸು
ಬೇಕೆ ಪ್ರೀತಿ ವೇದನೆ?
ಯಾತಕಾಗಿ ನನ್ನ ಪ್ರಾರ್ಥನೆ?

ಇತಿಗಳಿಲ್ಲ ಮಿತಿಗಳಿಲ್ಲ
ಎಲ್ಲೆಲ್ಲೂ ಪ್ರೀತಿ ಪಥಗಳೇ
ನಿದಿರೆಯಿಲ್ಲ, ಮಂಪರಿಲ್ಲ
ನಮ್ಮ ಪ್ರೀತಿ ಕಥೆಗಳೆಲ್ಲ ವ್ಯಥೆಗಳೇ?!

ನೋವ ನಲಿವ ಬೇಧ-ಭಾವ
ಇರದ ಮನದ ಮಂಥನ
ಪ್ರೀತಿ ಬರಲಿ ಬರದೆ ಇರಲಿ
ಪ್ರೀತಿ ಇರುವುದಂತೂ ದಿಟ
ನಲಿಯಬೇಕು ನೋವ ತಳ್ಳಿ
ಅದೇ ತಾನೇ ಬದುಕ ಹಟ?

Comments

sunaath said…
ಮಂಜುಳಾ,
ಬದುಕಿಗೆ ಬೇಕಾಗುವ ಅನಿವಾರ್ಯತೆಯನ್ನು ಚೆನ್ನಾಗಿ ಬಿಂಬಿಸಿದ್ದೀರಿ.
ಉತ್ತಮ ಕವನ.
Manjula said…
:-) ಧನ್ಯವಾದಗಳು ಸುನಾಥ್ ಅವರೆ.. ಇಷ್ಟು ಬೇಗ ನಿಮ್ಮ ಕಾಮೆಂಟ್ ನೋಡಿ ಖುಶಿ ಆಯ್ತು.

Popular Posts