ಮೊದಲ ಮಳೆ



ಬಿಸಿಲ ಬೇಗೆಯಿಂದ
ಬಹು ಬಳಲಿಹಳು ಇಳೆ
ಕಳೆದುಕೊಂಡಿಹಳು ಲವಲವಿಕೆಯ ಸೆಲೆ
ಬಯಸಿಹಳು ಪ್ರಫುಲ್ಲತೆಯ ಹೊಸದೊಂದು ಕಳೆ
ತನ್ನಲಿ ಹೊಸ ಜೀವ ತುಂಬುವ
ನಲ್ಲನ ಸವಿ ಸ್ಪರ್ಶಕೆ...
ಬಲು ಕಾತರದಿ ಕಾದಿದ್ದಾಳೆ...

ಆದರೆ ನಲ್ಲನೋ ಬಲು ತುಂಟ
ಇಳೆಯ ಒಡಲಿಂದಲೇ  ಪನ್ನೀರ ಕದಿಯುವ ಬಂಟ
ಕಾರ್ಮೋಡಗಳ ಜೊತೆಗೂಡಿ ಆಡುವ
ಇಳೆಯೊಂದಿಗೆ ಕಣ್ಣಾ ಮುಚ್ಚಾಲೆಯಾಟ...
ಹೆಚ್ಚಿಸುವ ಅವಳ ಮನದ
ವಿರಹ ಸಂಕಟ...

ಅಮೃತ ಘಳಿಗೆಯಲಿ
ಧರೆ- ಗಗನಗಳ ಮಿಲನ...
ಆತ್ಮೀಯ ಆಲಿಂಗನ
ನೀಡುತ್ತ ದಣಿದ ಧರಣಿಗೆ ಸಾಂತ್ವನ
ಗಗನರಾಯ ನೀಡುವನು ನಲ್ಲೆಗೆ...
ಸವಿ-ಸ್ಪರ್ಶದ ಸಿಂಚನ...

ಧರಣಿಯಲ್ಲಿ ರೋಮಾಂಚನ..
ಸಾಂಕೇತಿಕವಾಗಿ,
ಭುವಿಯಿಂದ ಹೊರ ಹೊಮ್ಮುವುದು ಸುವಾಸನ...
ಎಲ್ಲೆಲ್ಲೂ  ಎದ್ದು ಕಾಣುವುದು ಹೊಸದೊಂದು ಚೈತನ್ಯ..
ಹಸಿರಿನಿಂದ ನಳ-ನಳಿಸುವವು ಗಿರಿ- ಕಾನನ!

ಆರಂಭವಿನ್ನು ನವ-ಜೀವನ..
ಮೊದಲ ಮಳೆಯು
ಒಂದು ಸವಿ ಪ್ರೇಮ ಕಥನ!!..

ಚಿತ್ರ ಕೃಪೆ: ಅಂತರ್ಜಾಲ 

Comments

sunaath said…
Ah! Manjula,
A poet like you can see the romance in raining and beautifully convey this to readers.
Thanks to the rains and thanks to you!
ತರಸಿಡಿಲ ಸದ್ದಿಗೆ ಮೈ ಅವಚಿಕೊಂಡ ನಲ್ಲೆಯು, ಮಳೆಗೊದ್ದೆ ಅವಳ ಮನಸ್ಸೂ.

ರಸಿಕತೆ ರಸಿಕತೆ.
ಮನಸು said…
ಮೊದಲ ಮಳೇ ಪ್ರೇಮ ಕಥನವೇ ಸರಿ..:)) ಚೆನ್ನಾಗಿದೆ ಕವನ
bilimugilu said…
Very nice! ಪ್ರಕೃತಿ ಕವಿಯ ಪದಗಳಲಿ ಸಿಲುಕಿ ತನ್ನದೇ ಆದ ರೂಪು ಕಾಣುತ್ತಿದೆ....
ಬಹುಶ ಈ ಧರೆ, ಆ ಆಕಾಶ, ಮಳೆ, ಹೊಳೆ... ಇವುಗಳಿಗೆ ಗೊತ್ತಿದೆಯೋ ಇಲ್ಲವೋ -
ಕವಿಗಳು ಇವರನ್ನ ಮೆಚ್ಚಿ ಮೆಚ್ಚಿ ಬರೆಯುವ ಕವನಗಳ ಬಗ್ಗೆ!
- Roopa
balasubramanya said…
ಕವಿತೆ ಸುಂದರವಾಗಿ ಮೂಡಿಬಂದಿದೆ. ಇಷ್ಟಾ ಆಯ್ತು.
Swarna said…
ಚೆನ್ನಾಗಿದೆ ನಿಮ್ಮ ಗಗನಾನಿಳೆಯ ತುಂತುರು ಸಂಗೀತ
ಸ್ವರ್ಣಾ
ಪ್ರೇಮಕಥನ ಆರಂಭ! ಹಸಿರ ಮಗು ಚಿಗುರಲಿ! ಉಸಿರಾಗಲಿ ಜಗದ ಬಾಳಿಗೆ!
ನಿಮ್ಮ ಮೆಚ್ಚುಗೆಯ ನುಡಿಗಳು ಅದೆಷ್ಟು ಪ್ರೇರಕ ಅಂತ ನಿಮಗೆ ಅರಿವಿದೆಯೋ ಇಲ್ಲವೋ! ಕಾಕಾ :-)

ಬದರಿ ನಿಮ್ಮ ಅನಿಸಿಕೆ ನನ್ನ ಕವಿತೆಗಿಂತಲೂ ರಸಮಯ!

ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ ಮನಸು..

ರೂಪಾ ನಿಮ್ಮ ಕಾಮೆಂಟ್ ಬಹಳ ಹತ್ತಿರವಾಯಿತು.. ಧನ್ಯವಾದ

ಮನಃಪೂರ್ವಕ ಧನ್ಯವಾದಗಳು ಬಾಲು, ಸ್ವರ್ಣ ಮತ್ತು ಪುಷ್ಪರಾಜ ಅವರೇ

Popular Posts