ಇವತ್ತು ಶಾಲೆಲೀ...

ಇವತ್ತಿಗೆ ಒಂದು ವಾರ ಆಯ್ತು ನಾನು ಶಾಲೆಗೆ ಹೋಗೊಕೆ ಶುರು ಮಾಡಿ. 3-4 ದಿನದಿಂದ ಶಾಲೆ ಹೊರಗಡೆ ನಿಂತ್ಕೊಳ್ಳೋ punishment ಬೇರೆ. ಏನು ತಪ್ಪು ಮಾಡಿದ್ದು ನಾನು? ಗೊತ್ತಾ ನಿಮಗೆ? ನನ್ನ ಮಗ ನಂದನ್ ನ ಶಾಲೆಗೆ ಸೇರಿಸಿದ್ದು ;-) (ಪ್ಲೇ-ಸ್ಕೂಲ್). ದಿನ ಬೆಳಗಾದ್ರೆ ಶಾಲೆ ಹೊರಗಡೆ ನಿಂತ್ಕೊಳ್ಳೋ punishment ಇದ್ದಿದ್ರಿಂದ, ಇವತ್ತು ಹೇಗೆ ಕಾಲ-ಹರಣ ಮಾಡೋದು ಅಂತ ಸ್ಕೆಚ್ ಹಾಕ್ಕೊಂಡೆ ಶಾಲೆಗೆ ಹೊರಟಿದ್ದು. ಆದರೆ ಇವತ್ತು ಅಲ್ಲಿ ನಡೆದದ್ದೇ ಬೇರೆ. ನಂದನ್ ನ ಶಾಲೆಗೆ ಕಳಿಸಿ, ನಾನೊಂದೆರಡು ಫೋನ್ ಕರೆಗಳನ್ನು ಮಾಡಿ ಮುಗಿಸಿ, ಸುತ್ತ-ಮುತ್ತ ನೋಡ್ತಾ ಕುಳಿತಿದ್ದಾಗ ’ಹೋ...’ ಅಂತ ಎಂಟು-ಹತ್ತು ಮಕ್ಕಳು ಹೊರಗೆ ಬಂದ್ರು. ಎಲ್ಲರೂ ಬಣ್ಣ-ಬಣ್ಣ, ಸ್ಟೈಲ್ quotient ತುಂಬಾನೇ ಹೈ. Thank God ಮುಗ್ಧತೆನಲ್ಲಿ ಮಾತ್ರ ನೈಜವಾಗೇ ಇದ್ರು, ಗುಸು-ಗುಸು, ಪಿಸು-ಪಿಸು ಮಾತಾಡ್ತಾ.. ಜಿಗಿದಾಡ್ತಾ.. I know, ಈ ಕಾಲದಲ್ಲಿ ನೈಜತೆ ಕಾಣಿಸಿದ್ರೆ Thank God ಅಂತ ಹೇಳಬೇಕಾದ್ದೇ!

ಹಾಗೆ ನೋಡ್ತಾ ನೋಡ್ತಾ, 3-5 ವರ್ಷದ ಬಣ್ಣ-ಬಣ್ಣದ ಉಡುಪುಗಳ ಮಕ್ಕಳ ಸೈನ್ಯ ಹೊರಗೆ ಬಂತು. ಆವಾಗ ಅವರ PT hour. (ನೆನಪು ಮಾಡ್ಕೊಳ್ಳಿ PT hour.. ’ಸಾವಧಾನ್’, ’ವಿಶ್ರಾಮ್’, ’Attention’, ’Standitis’...) ನೆನಪಾಯ್ತಾ? ಹೂಂ ನನಗೂ ನೆನಪಾಯ್ತು, ಮಕ್ಕಳು ನೆನಪು ಮಾಡಿ ಕೊಟ್ಟರು. ಅವರ ವ್ಯಾಯಾಮಕ್ಕೆ ಸಾಥ್ ಕೊಡೋಕೆ ಡ್ರಮ್ ಬೇರೆ. ಆ ವಯಸ್ಸಿನ ಮಕ್ಕಳ PT hour ನೋಡೋಕೆ ತುಂಬಾನೆ ಮಜವಾಗಿತ್ತು. ಯಾರ್ ಯಾರಿಗೆ ಹೇಗೆ ಬೇಕೋ ಹಾಗೇ ಅವರ ವ್ಯಾಯಾಮ ಭಂಗಿಗಳು. ಒಂದೇ ಒಂದು ಅಂಶದಲ್ಲಿ ಎಲ್ಲರೂ ಒಗ್ಗಟ್ಟು ತೋರಿಸುತ್ತಿದ್ದರು, ಶಿಕ್ಷಕರು ’Standitis’ ಅಂದಾಗ, ’ಹೋ...’ ಅಂತ ಕಿರುಚೋದ್ರಲ್ಲಿ :-) ಅವರು ಹಕ್ಕಿ ಹಾಗೆ ಕೈ ಮಾಡಿ ಚಪ್ಪಾಳೆ ತಟ್ಟೋ ವ್ಯಾಯಾಮ ನನಗೆ ತುಂಬ ಇಷ್ಟವಾಯ್ತು.. (ತುಂಬಾ symbolic ಅನಿಸ್ತು..!) ಆಮೇಲೆ ಅವರು ’right about turn’ ಮಾಡ್ಕೊಂಡು , ರೈಲು ಕಟ್ಕೊಂಡು ಶಾಲೆ ಒಳಗೆ ಹೋಗಿಬಿಟ್ರು. ಅಷ್ಟೊತ್ತಿಗೆ ನನ್ನ ಮನಸ್ಸೂ ’about turn’ ಆಗಿಬಿಟ್ಟಿತ್ತು.. ಅವರ ಆ ಮುಗ್ಧ, ತುಂಟ ಚಟುವಟಿಕೆಗಳ ಉಲ್ಲಾಸ ನನ್ನ ಜೊತೆಗೆ ಉಳಿದುಬಿಟ್ಟಿತು.. ಇವತ್ತಿಗೆ ನನಗಿಷ್ಟು ಸಾಕು.. :-)

Comments

ನಮ್ಮ ಬಾಲ್ಯವನ್ನು ನೆನಪಿಸಿ ಬಿಟ್ಟಿರಿ. ಎ೦ಥದಿತ್ತು ಆ ದಿನಾ ಚೆಲ್ಲಿ ಹೋದ ಚೇತನಾ ಅ೦ದು ನಾವೂ ಎಳೆಯರೂ!॒. ಬಾಲ್ಯದ ಮುಗ್ದತೆ ಮನಸ್ಸಿಗೆ ತು೦ಬಾ ಸುಖ ನೀಡುತ್ತೆ. ಚೆ೦ದದ ನಿರೂಪಣೆ.
sunaath said…
ನಿಮ್ಮ ಮಗನ ಜೊತೆಗೆ ನಿಮಗೂ play home ಅನುಭವ ಸಿಕ್ತಾ ಇದೆ ಈಗ. ತುಂಬ ಮಜವಾಗಿದೆ. ನಮ್ಮ ಜೊತೆಗೂ ಹಂಚಿಕೊಳ್ಳಿ!
Roopa said…
ಬಾಲ್ಯದ ದಿನಗಳನ್ನು ಮತ್ತೊಮ್ಮೆ ಮೆಲಕು ಹಾಕುವಂತೆ ಮಾಡಿದ್ರಿ, ಥ್ಯಾಂಕ್ಸ್!
"ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲಾ.." ಸಾಲುಗಳು ನೆನಪಾದವು:)
Hariprasad said…
ಎಳೆ ಎಳೆಯಾಗಿ ಬಿಚ್ಚಿಡುವ ನಿಮ್ಮ ಅನುಭವಗಳು......

ನಮ್ಮ ಮನ ಕುಲುಕಿದೆ.....

ಮತ್ತೆ ಬಾಲ್ಯವ ನೆನೆಯುವಂತೆ ಮಾಡಿದೆ....

ತುಂಬು ಹೃದಯದ ದನ್ಯವಾದಗಳು,
-ಹರಿಪ್ರಸಾದ್

Popular Posts