ಜನುಮ ದಿನ



ಮನಸೊಂದು ಕುಡಿಯೊಡೆದ
ಮಧುರ ದಿನ
ಕನಸೊಂದು ಕಣ್ಬಿಟ್ಟ
ಮಧುರ ಕ್ಷಣ
ತನುವಲ್ಲಿ ತನುವರಳಿ
ಭುವಿಗೆ ಮರಳಿದ ದಿನ...

ಆ ಮನಸು ಮಡಿಲಾಗಿ
ಈ ಮನಸು ಮಗುವಾಗಿ
ಮನಸೆಲ್ಲ ನಗುವಾಗಿ
ನಕ್ಕು-ನಗಿಸಿದ ದಿನ
ಅತ್ತು-ಅಳಿಸಿದ ದಿನ

ಒಡಲ ಒಗಟು ಜೀವವಾದ ದಿನ
ಜೀವ ನಂಟು ಉಸಿರು ಪಡೆದ ದಿನ
ಕತ್ತಲಿಂದ ಬೆಳಕಿಗೆ ಕಣ್ಬಿಟ್ಟ ದಿನ
ಹೊಚ್ಚ ಹೊಸ ಬದುಕ ತೆರೆದಿಟ್ಟ ದಿನ

ನವ ಜೀವಕೆ ನಾಂದಿಯಾದ
ಆ ಸೋಜಿಗದ ದಿನ
ಪ್ರತಿ ವರುಷ ಮರಳುವುದು
ನೆನಪುಗಳ ನಗೆ ಚೆಲ್ಲಿ
ಮತ್ತೆ ಮರೆಯಾಗುವುದು
ಈ ಜನುಮ ದಿನ!

Comments

ಜನುಮದಿನಾಚರಣೆಯನ್ನು ಸೊಗಸಾಗಿ ವಿವರಿಸಿದ್ದಿರಿ. ನಿಮ್ಮ ಜನುಮದ ದಿನ ಪ್ರಸ್ತುತವಾಗಿ ಬರೆದಿದ್ದರೆ ತಮಗೆ ಹುಟ್ಟು ಹಬ್ಬದ ಶುಭಾಶಯಗಳು ಮತ್ತು ಸ೦ತಸದ ದಿನಗಳು ನೂರಾರಾಗಿ ಮರಳಲಿ.
Manjula said…
ಧನ್ಯವಾದಗಳು ಸರ್.ಹೌದು, ಆವತ್ತು ನನ್ನ ಜನ್ಮ ದಿನ :-)
sunaath said…
ಜನ್ಮದಿನದ ಶುಭಾಶಯಗಳು. ಈ ಕವನ ನಿಮ್ಮ ಮಗುವಿನ ಜನನದ ಬಗಗೆ ಎಂದು ಭಾವಿಸಿದ್ದೆ!
Manjula said…
ಬರೆದದ್ದು ಅವನು ಹುಟ್ಟಿದ ನೆನಪಿನಲ್ಲೇ, ಆದರೆ ಆವತ್ತು ಇದ್ದದ್ದು ನನ್ನ ಜನ್ಮ ದಿನ, ಅವಂದೂ ಬಂತು, ಮುಂದಿನ ತಿಂಗಳಲ್ಲೇ ಇದೆ. ಧನ್ಯವಾದ ತಮ್ಮ ಶುಭ ಹಾರೈಕೆಗೆ :-)

Popular Posts