ಸ್ವಗತ




ಖಾಲಿ ಹಾಳೆಯ ಮೇಲೆ
ಕಸಿವಿಸಿಯ ಮಸಿಯ ಹಸಿ
ಭಾವಗಳ ವಿಶ್ರಾಮಕೆ
ಬಿಳಿ ಹಾಳೆಯ ಹಾಸಿಗೆ

ಆಂತರ್ಯದ ತೊಟ್ಟಿಲು
ಲೇಖನಿಯ ಮಸಿಯ ಬಟ್ಟಲು
ಅದ್ದಿ-ಬಸಿದು ಬರೆಯುತಿರುವೆ
ಅಂತರಾಳ ಮುಟ್ಟಲು..

ಮನದ ಮೊನಚು
ಅದರ ಮುನಿಸು
ಅದರ ಸೊಗಸು
ಅದರ ಬಿರುಸು
ಎಲ್ಲ ಬೆರಳ ತುದಿ

ಬೆರಳುಗಳಿಗೆರಡು ಮುತ್ತು
ಲೇಖನಿಗೆ ನೀವೆ ಜೀವ-ತಂತು
ಖಾಲಿ ಹಾಳೆ ಬಾಳ ಗೆಳತಿ
ಸ್ವಗತಕೆ ಸಂಗಾತಿ!

Comments

sunaath said…
ಅರೆ ಮಂಜುಳಾ,
ನಿಮ್ಮನ್ನು ಎರಡು ವರ್ಷದ ಮ್ಯಾಲ ನೋಡ್ತಾ ಇದ್ದೀನಲ್ಲಾ!
ತುಂಬಾ ಖುಶಿ! ನಿಮ್ಮ ಎರಡು ಕವನಗಳನ್ನು ಓದಿ ಭಾಳಾ ಸಂತಸ
ಆಯ್ತು. ಛಂದ ಕವನ ಬರದೀರಿ.
ಒಳ್ಳೆ ಸಾಹಿತ್ಯದ ನಿರೀಕ್ಷೆಯಲ್ಲಿ ಇದ್ದೇನಿ.
Manjula said…
ಭಾಳ ಖುಶಿ ಆಯ್ತ್ರೀ ನಿಮ್ಮ ಕಾಮೆಂಟ್ ನೋಡಿ.. ಬರಿಯಾಕ ಶುರು ಮಾಡೀನಿ. ನಿಮ್ಮಂಥವರ ಆಶೀರ್ವಾದ ಇದ್ರ ಬರೀತನ ಇರ್ತೀನಿ :-)
ಬಹಳ ಚೆನ್ನಾಗಿದೆ ಕವನ. ಭಾವಗಳ ವಿಶ್ರಾ೦ತಕ್ಕೆ ಬಿಳಿ ಹಾಳೆಯ ಹಾಸಿಗೆ ಅದ್ಭುತವಾದ ಹೋಲಿಕೆ. ಬರೆಯುತ್ತಾ ಇರಿ.
Manjula said…
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸೀತಾರಾಮ ರವರೆ. ಮತ್ತೆ ಬನ್ನಿ :-)
ನಿಮ್ಮ ಕವನಗಳು ತು೦ಬಾ ಚೆನ್ನಾಗಿವೆ.
ಹಿಡಿಸಿತು.ಬರೆಯುವುದನ್ನು ಮು೦ದುವರೆಸಿ.
Manjula said…
ಧನ್ಯವಾದಗಳು ಮನಮುಕ್ತಾ.. :-)
chennagide ri madom avre:) ishtavaaytu:)
chennagide ri madom avre:) ishtavaaytu:)
umesh desai said…
ಛಂದ ಅದ ಶಬ್ದಗಳ್ ಉಪಯೋಗ ಭಾವನಾದ ಅಭಿವ್ಯಕ್ತಿ ಎರಡೂ
ಸೇರಿದ್ವು ಬರಕೋತ ಇರ್ರಿ ಓದಲಿಕ್ಕೆ ನಾವು ತಯಾರು ಇದ್ದೇವಿ..
ಬಿಳಿಯ ಹಾಳೆಯ ತುಂಬ ಮುದ್ದಾದ ಅಕ್ಷರಗಳಷ್ಟೇ ಸಂಭವಿಸಲಿ ಗೆಳತಿ. ಮನಸ್ಸು ಯಾವಾಗಲೂ ಹಗುರವಾಗಿರಲಿ.

Popular Posts