ಅನುಭೂತಿ...
ಮನದ ಒಂದು ಮೂಲೆಯಲ್ಲಿ
ಪುಟ್ಟದೊಂದು ಗೂಡು ಕಟ್ಟಿ
ಬೆಚ್ಚನೆ ಹೊದ್ದು ಮಲಗಿ
ಪ್ರೀತಿ ಕನಸು ಹೆಣೆದಿದೆ
ಕನಸ ತುಂಬ ನವಿಲ ಗರಿ
ಬದುಕು ಬಣ್ಣ-ಬಣ್ಣ
ಮಧ್ಯ-ಮಧ್ಯ ನೆನಪ ಸೋನೆ
ಅಲ್ಲಲ್ಲಿ ಅರಳಿದೆ ನಗೆ ಹೂ
ಹೂ ಮೇಲೆ ನೀರ ಹನಿ
ನಲ್ಲ ಕೊಟ್ಟ
ಸಿಹಿ ಮುತ್ತ ನೆನಪಿನ ಭಾವ..
ಸುತ್ತಲೆಲ್ಲ ಮಂದ ಸುಗಂಧ
ತಂಗಾಳಿ ಮೃದು ಸ್ಪರ್ಶ
ಎಲ್ಲೆಯಿಲ್ಲ ಮೇರೆಯಿಲ್ಲ
ಕಲ್ಪನೆಗಳ ಹರ್ಷ..
ಅಷ್ಟರಲ್ಲೇ ಯಾರೋ
ಮನದ ಕದ ತಟ್ಟಿದ ಸದ್ದು
ಪ್ರೀತಿ ಕನವರಿಸುತಿದೆ
ಕನಸಿನಿಂದ ಎಚ್ಚೆತ್ತು!
ಹತ್ತು ಹಲವು ಭಾವಗಳು
ಮನದ ಕೋಣೆಯಲ್ಲೇ ವಾಸ
ಬರೀ ಪ್ರೀತಿಯೊಂದೆಯಲ್ಲ
ಮನ ಬದುಕಿಗೇ ನಿವಾಸ..
ಮನದಲಿಹುದು ಪ್ರೀತಿಗೆಂದೇ
ಬಲು ವಿಶೇಷ ಸ್ಥಾನ
ಆದರೂ ಪ್ರೀತಿಗೇಕೋ
ಹೇಳಲರಿಯದ ಗೊಂದಲ!
ಪ್ರೀತಿ ಮೌನ, ಪ್ರೀತಿ ಮಾತು
ಪ್ರೀತಿ ಜೀವಸೆಲೆ
ಆದರೂ ಅರಿಯಲಾರೆ
ಈ ಪ್ರೀತಿ ನೆಲೆ!
Comments
ಕವನ ತುಂಬಾ ಚನ್ನಾಗಿದೆ, ಬರವಣಿಗೆ ಸೊಗಸಾಗಿದೆ, ಇದೇ ತರಹದ ಅನೇಕ ಕವನಗಳು ತಮ್ಮಿಂದ ಮೂಡಿ ಬರಲಿ
ಶುಭಾಷಯಗಳು
*ಮಂಜುನಾಥ ತಳ್ಳಿಹಾಳ
ಗದಗ ಜಿಲ್ಲೆ
ಕವನ ತುಂಬಾ ಚನ್ನಾಗಿದೆ, ಬರವಣಿಗೆ ಸೊಗಸಾಗಿದೆ, ಇದೇ ತರಹದ ಅನೇಕ ಕವನಗಳು ತಮ್ಮಿಂದ ಮೂಡಿ ಬರಲಿ
ಶುಭಾಷಯಗಳು
*ಮಂಜುನಾಥ ತಳ್ಳಿಹಾಳ
ಗದಗ ಜಿಲ್ಲೆ
ಬಲು ವಿಶೇಷ ಸ್ಥಾನ
ಆದರೂ ಪ್ರೀತಿಗೇಕೋ
ಹೇಳಲರಿಯದ ಗೊಂದಲ!
I liked this stanza very wonderful and meaning full. Sampoorna Kavana channgide