ಮಳೆ.. - ೧

ಪದೇ ಪದೇ ನೆನಪಾದೆ.. ಪದೇ ಪದೇ ನೆನೆದೆ ಅನ್ನೋ ಥರ.. ನಿನ್ನ ಬಗ್ಗೆ ಮತ್ತೆ ಬರೆಯೋಣ ಅನಿಸ್ತಾ ಇದೆ.. ಕಲ್ಪನೆಗಳಿಗೆ ಕೊನೆಯೆಲ್ಲಿ..? :) ಈಗ ನಿನ್ನ ಋತು.. ದಿನ-ಬೆಳಗಾದರೆ ಮತ್ತೆ ನಿನ್ನ ನೋಡುವ ಅವಕಾಶ ಸಿಗಬಹುದೇನೊ ಅನ್ನೋ ಭಾವನೆಯಲ್ಲೇ.. ದಿನಗಳು ಕಳೆದದ್ದು ಗೊತ್ತೇ ಆಗಲ್ಲ...

ಸುಡು ಬಿಸಿಲ ದಿನಗಳಲ್ಲೂ ನಿನ್ನ ನಿರೀಕ್ಷೆಯಲ್ಲೇ ದಿನ ನೂಕ್ತೀನಿ ನಾನು.. ಆದರೆ ಒಮ್ಮೊಮ್ಮೆ ಅನಿಸುತ್ತೆ.. ಆ ಬಿಸಿಲ ಬಿಸಿ ತಾಕೋದಕ್ಕೇ ನಿನ್ನ ತಂಪು ಅಷ್ಟು ಹಿತ ಅನಿಸೋದು ಅಂತ..ಸದಾ ಕಾಲ ನೀನೇ ಇದ್ದಿದ್ರೆ ಹೇಗಿರೋದು...? ಚೆನ್ನಾಗಿರೋದು ಅಂತ ಅನಿಸುತ್ತೆ.. ಆದರೆ ಎಲ್ಲೋ ಅನುಮಾನ.. ಹಾಗಿದ್ದಿದ್ರೆ.. ನಾನು ನಿನ್ನ, ನಿನ್ನ ಬರುವನ್ನ, ನಿನ್ನೊಡನೆ ಕಳೆಯೋ ಪ್ರತಿ ಕ್ಷಣಗಳನ್ನ ಇಷ್ಟು ಗಾಢವಾಗಿ ಬಯಸುತ್ತಿದೆನಾ/ಪ್ರೀತಿಸುತ್ತಿದೆನಾ ಅಂತ.. ಅರ್ಥ ಆಗುತ್ತೆ ನಿಂಗೆ ಅನ್ಕೋತೀನಿ.. ಬೇರೆಯವರಿಗೆ ಖುಶಿ ತರುವವರಿಗೆ ಅರ್ಥ ಮಾಡ್ಕೋಳ್ಳೋ ಶಕ್ತಿನೂ ಇರತ್ತೆ ಅಂತ ನಂಗೊತ್ತು :) ಹಾಡು ನೆನಪಾಗ್ತಾ ಇದೆ.."ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ನಿಜ ಅನಿಸಲ್ವ ನಿನಗೆ..?

ಬೇಸಿಗೆಯ ವಿರಹದ ದಿನಗಳ ಬಳಿಕ.. ಬಹಳ ಕಾಯಿಸಿ ಸತಾಯಿಸಿ ಬರ್ತೀಯ.. ನನಗೆ ನಿನ್ನ ಮೇಲಿರೋ ಪ್ರೀತಿಗೆ.. ನೀನು ಬಂದರೆ ಬಣ್ಣಿಸಲಸದಳ ಸಂಭ್ರಮ.. ಯಾವ ಹಬ್ಬಕ್ಕೂ ನಾನಿಷ್ಟು ಸಡಗರ ಪಡಲ್ಲ.. ನಿನ್ನ ಜೊತೆ ಇರೋದೆ ಹಬ್ಬ ನನಗೆ :) ಇರುವಷ್ಟು ಹೊತ್ತು ಪ್ರೀತಿ ಮಳೆ.. (ಮತ್ತೆ ಬರೀತಿನಿ ಪ್ರೀತಿ ಮಳೆ ಬಗ್ಗೆ) ಆ ಮಳೆಯಲ್ಲಿ ನೆಂದು, ಮಿಂದು ಮೈ ಮರೆತು ಮನದಲ್ಲಿ ಸಂತಸದ ಹೊಳೆ ಹರೀತಾ ಇರುವಾಗಲೇ ಕಾಲನ ಗಂಟೆ.. 'ಈ ಟೈಮ್ ಅನ್ನೋದು ಪಕ್ಕಾ ೪೨೦' ಅಂತ 'ಮುಂಗಾರು ಮಳೆ' ಲಿ ಒಂದು ಸಂಭಾಷಣೆಯ ಸಾಲು.. ನಿನ್ನ ಬಗ್ಗೆ ಹೇಳ್ತಾ ಇಲ್ಲ ನಾನು.. 'ಮುಂಗಾರು ಮಳೆ' ಅನ್ನೋದು ಒಂದು ಸುಂದರ ಕನ್ನಡ ಚಿತ್ರದ ಹೆಸರು.. ಹೆಸರಿಗೆ ತಕ್ಕಂತೆ ಆ ಚಿತ್ರಕ್ಕೆ ನೀನೇ ಬಂಡವಾಳ.. ಅದರ ಮಾತು ಬೇಡ ಈಗ..

ಸರಿ ಟೈಮ್ ಆಯ್ತು.. ನನಗೆ ನಂಬೋಕೇ ಆಗಿರಲ್ಲ.. ನಿನ್ನ ವಿದಾಯದ ಸಮಯ ಬಂತು ಅಂತ.. ಮನದಲ್ಲಿ ಎಷ್ಟೊಂದು ಆನಂದ.. ಅಷ್ಟೇ ಬೇಸರ..ನೆನಪುಗಳ ಹಸಿರನ್ನ ಮತ್ತೆ ಅಗಲಿಕೆಯ ಬೆಂಗಾವಲನ್ನ ಎರಡನ್ನೂ ಒಟ್ಟೊಟ್ಟಿಗೆ ಉಡುಗೊರೆ ಕೊಟ್ಟು ನಿಧಾನವಾಗಿ ಮರೆಯಾಗ್ತೀಯ ನೀನು.. ಆಗಷ್ಟೇ ಮೈ ತಾಕಲೋ ಬೇಡವೋ ಅನ್ನೋ ತಂಗಾಳಿಯ ಚಳಿನಲ್ಲಿ ನಾನು ಮೆಲ್ಲಗೆ ಗುನುಗ್ತೀನಿ.. "ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ಅಂತ.. :)

Comments

Anveshi said…
ಅಬ್ಬಾ.... ಈ ಬ್ಲಾಗೆಂಬ ಮಳೆ ಸುರಿದಿದ್ದು ಗೊತ್ತೇ ಇರ್ಲಿಲ್ಲ....

ಚೆನ್ನಾಗಿದೆ ನೆನಪುಗಳ ಸುರಿಮಳೆ...
Manjula said…
ಕನ್ನದ ಬ್ಲಾಗ್ ಮಂಡಲ ಇಷ್ಟು ದೊಡ್ಡದಾಗಿದೆ ಅಂತ ತಿಳಿದದ್ದೇ ಅಸತ್ಯಾನ್ವೇಷಣೆ ಮಾಡಿದ ಮೇಲೆ.. :) ಧನ್ಯವಾದಗಳು..
ಹಾಗೇ md ಯವರ ಸಲಹೆಯೂ ಸಿಕ್ತು.. ನಿಮ್ಮ ಬ್ಲಾಗ್ ಲಿಂಕು-ಲಿಸ್ಟು ಗಳಲ್ಲಿ, ಈ ಪುಟ್ಟ ಬ್ಲಾಗ್ ನ ಹೊಸ ಕೊಂಡಿ ಸೇರಬಹುದು ಅಂತ..
nishu mane said…
chennaagi bareeteera ree. nimma blog iddiddu nangU gottirlilla. nODi khishi aaytu. munduvaresi.

Meera.
ಈ ಸಾಯಂಕಾಲ ನನ್ನ ಜೊತೆಗೊಂದು ಹುಡುಗಿಯಿರದಿದ್ದರೂ, ಕಲ್ಪನಾ ಹುಡುಗಿಯ ಜೊತೆ ನಾನೇ ಸಂಭಾಷಣೆ ನಡೆಸಿದಂತಾಯ್ತು ಮಂಜುಳಾರವರೆ. ಚೆನ್ನಾಗಿದೆ ಪಿಸು ಮಾತು.

ಮಳೆ ಇನ್ನಷ್ಟು ಬರಲಿ
Unknown said…
ಓದುಗಾರನನ್ನು ಹಾಯಾಗಿ ಓಡಿಸಿಕೊಂಡು ಹೋಗುವ ಸುಂದರ ನಿರೂಪಣೆ.. ಓದಿದ ಮೇಲೆ ಐಸ್ ಕ್ರೀಂ ಚಪ್ಪರಿಸಿದ ಅನುಭವ
-ಹುಸೇನ್
http://nenapinasanchi.wordpress.com/
ಗಾಢವಾಗಿ ತಟ್ಟ ಬಲ್ಲ ಬರಹಗಳು, ಹಳೆಯ ಚಲನಚಿತ್ರ ಗೀತೆಗಳಂತೆ. ಈ ಮಳೆಯ ನೆನಪುಗಳು ನನಗೆ ಕಾಡುತಾವ ಸದಾ...

ಅತ್ಯುತ್ತಮ ಬರಹ ಮತ್ತು ನಿರೂಪಣಾ ಶೈಲಿ.
ಇಷ್ಟವಾಯಿತು...

Popular Posts