Wednesday, April 18, 2007

ವಾಚಾಳಿ..

ದಿನ ಬೆಳಗಾದ್ರೆ ಏನೇ ನಿನ್ನ ಕಾಟ ಅಂತಿಯಾ? ಅಲ್ಲಾ ಸೂರ್ಯ ನೂ ದಿನ ಬೆಳಗದ್ರೆ ಬರ್‍ತಾನೆ.. ಯಾರಿಗಾದ್ರೂ ಬೇಜಾರಾಗುತ್ತಾ ಅವನು ಬಂದ್ರೆ.. ನಿಜ ಅಂದ್ರೆ ಅವನು ಮರಳಿ ಬಂದ್ರೇನೆ ಮತ್ತೊಂದು ದಿನ ಅಂತ ಶುರು ಆಗೋದು ಅಲ್ವಾ? ಅವನು ಬಂದ್ರೇನೆ ಬೆಳಗು ಅವನು ಬಂದ್ರೇನೆ ಬದುಕು...

ಹಾಗೆ ನಾನೂ ಕೂಡ.. ಜೀವನದಲ್ಲಿ ಆಸಕ್ತಿನೇ ಇಲ್ದೇ ಬದುಕೋ ಜನಕ್ಕಿಂತ ನಾನು ವಾಸಿ ಅಂತ ನಿನಗನಿಸಲ್ವ.. ನಕ್ಕೋ,ಅತ್ತೋ, ಕೋಪ ಮಾಡ್ಕೊಂಡೋ, ವಟ ವಟ ಅಂತ ಮಾತಾಡ್ಕೊಂಡೋ.. ಹೇಗೋ.. ಒಟ್ಟಿನಲ್ಲಿ..ಜೀವನದ ಫೀಲ್ ನ ನಾನು ನಿಂಗೆ ಕೊಡ್ತೀನಿ ಅಂತ ನಿನಗನಿಸಲ್ವಾ? ಯೋಚನೆ ಮಾಡು.. ನಾನಿಲ್ದಿದ್ರೆ.. ಬಿಕೋ ಅನಿಸಲ್ಲ..?

ಏನು ಜಂಭದ ಕೋಳಿ ಬಡಾಯಿ ಕೊಚ್ಕೊಂತೀಯ ಅಂತ ಬೇಕಾದ್ರೂ ಅನ್ಕೋ.. ನಾನು ಸುಮಾರು ದಿನಗಳವೆರೆಗೆ ನಿನ್ನ ಜೀವನದಲ್ಲಿ ಇರಲ್ಲ ಅಲ್ಲ.. ಆವಾಗ ಇದನ್ನ ಓದು (ಆ ದಿನ ಬರದೇ ಇರಲಿ ಅಂತಾನೇ ಪ್ರಾರ್ಥನೆ.. ಆದ್ರೂ..) ನಿಂಗೆ ನಿಜ ರಿಯಲೈಜ್ ಆಗತ್ತೆ..

ಸುಮ್ನೆ ಕೂತು.. (ಐ ಮೀನ್.. ಮಾತಾಡ್ದೆ ಸುಮ್ನೆ ಕೂತು :) ) ರೂಢಿ ಇಲ್ಲ ನಂಗೆ.. ಮಾತಾಡ್ಬೇಕು ಆಂತ ಅನಿಸಿದಾಗ ಮಾತಾಡ್ಬೇಕು.. ಮಾತಾಡೋಕೆ ಟಾಪಿಕ್ ಬೇಕು ಅಂತಾನೂ ಏನೂ ಇಲ್ಲ.. ಈಗ ಕುಟ್ತಾ ಇದೀನಲ್ಲ ತೌಡು.. ಇದೇ ಥರ ಮಾತಾದ್ರೂ ಸಾಕು.. :) ಅಲ್ಲ ಅಷ್ಟಕ್ಕೂ ಭಾಷೆ ಅಂತ ಇರೋದು ಯಾಕೆ ಅಂತಾ..? ಮನಸಿಗೆ ಬಂದದ್ದನ್ನ ವ್ಯಕ್ತ ಪಡಿಸೋಕೆ ಅಂತ ತಾನೆ..? ಸೊ.. ಮಾತಾಡ್ಬೇಕು.. ಮಾತಾಡ್ತಾನೇ ಇರಬೇಕು.. ಅದೂ ನಿನ್ನ ಜೊತೆ ಮಾತಾಡೊ ಮಜಾ ನೇ ಬೇರೆ (ಕಾಟ ಅಂತ ನೀನು ಅನ್ಕೋಬಹುದೇನೋ.. ಆವಾಗಾವಾಗ.. ಎನೂ ಮಾಡಕಾಗಲ್ಲ ಸಾರ್.. ಸ್ವಲ್ಪ ಅಡ್ಜಸ್ಟ್ ಮಾಡಿ.. :) ) ಈಗ ಅಂತೂ ಬ್ಲಾಗ್ ಕೈಗೆ ಸಿಕ್ಬಿಟ್ಟಿದೆ..ಮಂಗನ ಕೈಗೆ ಮಾಣಿಕ್ಯ ಸಿಕ್ಕ ಹಾಗೆ (ನಾನು ಬ್ಲಾಗ್ ಬಗ್ಗೆ ಹೇಳ್ತಾ ಇರೋದು.. ನಿನ್ನ ಬಗ್ಗೆ ಅಲ್ಲ..;-) ) ಒಂದೊಂದ್ ಸಲ ನೀನಿಲ್ದೆ ಇದ್ರೂ ಪರವಾಗಿಲ್ಲ.. ಬ್ಲಾಗ್ ಇದೆಯಲ್ಲ.. ನೀನು ಅನ್ಕೊಂಡು ಮಾತಾಡೋಕೆ.. ಈಗ ಮಾಡ್ತಾ ಇದೀನಲ್ಲ ಹಾಗೆ.. :)

ಅದೇನೇ ಇರಲಿ ನೀನು ನೀನೇ.. ಬ್ಲಾಗ್ ನಿನ್ಮುಂದೆ ಏನೂ ಇಲ್ಲ :)

ಸಾಕು ಅನ್ಸುತ್ತೆ.. ಉಫ್.. ಸುಸ್ತಾಯ್ತು.. :)

3 comments:

Biby Cletus said...

Nice post, its a really cool blog that you have here, keep up the good work, will be back.

Warm Regards

Biby Cletus - Blog

Satish said...

"ಭಾದ",

ಸಾಕೂ ಅಂತ 'ಉಫ್' ಅಂದ್ ಬಿಡಬೇಡಿ, ಇನ್ನೂ ಉದ್ದುದ್ದಕ್ಕೆ ಹಾಗೇ ಮುಂದುವರೆಯಲಿ ನಿಮ್ಮ ವಾಚಾಳೀತನ!

Bhava-Darpana said...

ಧನ್ಯವಾದಗಳು.. ನಿಮ್ಮ ಕಾಮೆಂಟ್ ನೋಡಿ ಸಂತೋಷ ಆಯ್ತು :)
ಮಾತಿಗೇನೂ ಬರ ಇಲ್ಲ.. ಮಾತಾಡಲು ಬೇಕಾದ ಯೋಚನ ಲಹರಿಗಳು ಹರಿಬೇಕು ಅಷ್ಟೇ :)