ಆಶಯ..

ನಿನ್ನ ಮನದ ಕದವ ತಟ್ಟಿ
ಇಣುಕಿ ನೋಡುವ ಆಸೆ

ಮನದಿ ಬಚ್ಚಿಟ್ಟ ಮುಗ್ಧ ಭಾವಗಳ
ತಟ್ಟಿ ಎಬ್ಬಿಸುವಾಸೆ

ಆ ನಿನ್ನ ಹುಸಿ ಮುನಿಸ
ಕೆಣಕಿ ಕೆರಳಿಸುವಾಸೆ

ಆ ಕಣ್ಣಿನಂಚಿನಲಿ
ಪ್ರೀತಿ ಚಿಮ್ಮಿಸುವಾಸೆ

ನಿನ್ನ ಮನದಂಗಳದಿ
ಬಣ್ಣ ತುಂಬಿಸುವಾಸೆ

ಮನ ಕಲಕುವ ನೋವುಗಳ
ನಿನ್ನ ಮನದಿ ಅಳಿಸುವ ಆಸೆ

ಆ ಕೆಂದುಟಿಗಳಲಿ
ನಗೆ ಹೂ ಅರಳಿಸುವಾಸೆ

ನಿನ್ನ ಆ ನಗುವಿನಲಿ
ನನ್ನೇ ಮರೆಯುವ ಆಸೆ

ನಿನ್ನ ಸಂತಸವೊಂದೆ
ಈ ಮನದ ಒತ್ತಾಸೆ

ನನ್ನುಸಿರ ಪ್ರತಿ ಕ್ಷಣವೂ
ನಿನಗೆ ಮುಡಿಪಿಡುವಾಸೆ...!!!

Comments

tangaali said…
Chikka Chikka Asegala, chokka kavana.
MD said…
ನಿಮ್ಮ ಆಸೆಗಳ ದ್ವಿಪದಿಗಳು ತುಂಬಾನೆ ಸುಂದರವಾಗಿದೆ.
"ಮನ ಕಲಕುವ ನೋವುಗಳ
ನಿನ್ನ ಮನದಿ ಅಳಿಸುವ ಆಸೆ" lovely line.

Plz visit http://bogaleragale.blogspot.com/
and send your blog link.

Popular Posts