ಗಗನ

ಗಗನ...
ಓ ವಿಶಾಲ ಗಗನವೇ
ನೀ ಎನ್ನ ಆದರ್ಶ..
ಅಡಗಿರುವವು ನಿನ್ನಲ್ಲಿ
ನೂರಾರು ರಹಸ್ಯ..
ವಿವರಿಸ ಹೋದರೆ ಅವನ್ನು
ಅದೊಂದು ಹುಚ್ಚು ಸಾಹಸ..
ಆದರೂ,
ಬೆಳಗಿನಿಂದ-ಬೈಗಿನವರೆಗೆ ಆಗುವ
ಬಣ್ಣದ ಬದಲಾವಣೆ
ಮೂಡಿಸುವವು ನನ್ನಲ್ಲಿ
ಎನೇನೋ ಕಲ್ಪನೆ
ಆ ನಿನ್ನ ತಿಳಿ ನೀಲಿಯ ನಿರ್ಮಲತೆಯ
ಒದಗಿಸಬಲ್ಲೆಯ ನೀ ನನ್ನ ಮನಕೆ
ಚುಮು ಚುಮು ಬೆಳಗಿನ
ಆ ಕೆಂಪು ಬಣ್ಣದ ಲವ-ಲವಿಕೆಯ
ತುಂಬಬಲ್ಲೆಯಾ ನೀ ನನ್ನಲಿ?
ಮಳೆ-ಬಿಸಿಲಿನ ಆಲಿಂಗನದಿಂದ
ನಿನ್ನಂಗಳದಲಿ ಮೂಡುವ
ಆ ಮಳೆ ಬಿಲ್ಲ ರಂಗುಗಳ
ಹರಡಬಲ್ಲೆಯಾ ನೀ ನನ್ನ ಬದುಕಲೂ..?
ಒ ನೀಲಿಯಾಗಸ..
ನಿನ್ನ ವೈಶಾಲ್ಯತೆಯ ಸ್ವಲ್ಪ ಭಾಗವ
ಒದಗಿಸು ನನ್ನ ಹೃದಯಕೆ
ನೀಡೆನಗೂ ಒಂದು ಅವಕಾಶ
ಹೃದಯವಂತಳಾಗಿ ಬಾಳುವುದಕೆ..

Comments

nesara said…
I am fortunate to have this poet as my colleague. I admire her because even in this busy schedule she has kept the light of talent alight in her. I make a point to read all her poems. Keep up the good work.

Popular Posts